ಮಂಗಳವಾರ, ಅಕ್ಟೋಬರ್ 28, 2014

ಹನಿಘನಿ



ನೋಡಿ ಹೇಳಿಬಿಟ್ಟಿರೋ
ಮುಗಿಯಿತು ಕತೆ.
ಮತ್ತೆ ಹಿಂತಿರುಗಿ ನೋಡುವಂತಿಲ್ಲ
ಸತ್ಯವೋ ಸುಳ್ಳೋ, ಕತೆಗೆ ಕತೆ ಪೋಣಿಸಿ
ಬೃಹದ್ಗ್ರಂಥ ರೆಡಿಯಾಗಬೇಕು

ಹಾಗೆಂದೂ ಹೇಳದೆ ಕುಳಿತರೂ ಇಲ್ಲಿ ನೆಲೆಯಿಲ್ಲ
ಏಕಾಏಕಿ ನಿಮ್ಮನ್ನು ‘ಕೆಲಸಕ್ಕೆ ಬಾರದವ’ ಎಂದು ನಿಧ‍ರಿಸಿಬಿಡುತ್ತಾರೆ

ಅದಕ್ಕೆ ಹುಟ್ಟುವಾಗಲೇ ಮಾತೇ ಆಡದವನಾಗಿ ಹುಟ್ಟಬೇಕು
‘ಮೂಗ’ ಎಂದರೂ ನೋವಾಗುತ್ತದೆ.

ಬುಧವಾರ, ಅಕ್ಟೋಬರ್ 15, 2014



ನೀನೇ,
ನಿನ್ನದೇ ಪ್ರಯೋಗಾಲಯದಲ್ಲಿ
ಯಾವುದಕ್ಕೋ ಇನ್ನಾವುದನ್ನೋ ಸೇರಿಸಿ
ನನ್ನನ್ನು ಮಾಡಿರುವೆ
ಈಗ ನೀನೆ ಮತ್ತಾವುದನ್ನೋ ಸೇರಿಸಿ
ಹೀಗೆಯೇ ಆಗಬೇಕೆಂದುಕೊಂಡಿರುವೆ
ಆದರೆ
ನನಗೆ ನಿನ್ನ ನಿರೀಕ್ಷೆಗಳನ್ನು ಮೀರೋದರಲ್ಲೇ
ತೃಪ್ತಿ ಇದೆ.

ಹನಿಘನಿ

ಮರದ  ಕೆಳಗೆ ಒಂದು
ಕಲ್ಲು ಕಂಡರೂ ಸಾಕು,
ನನ್ನ ಜನ
ಪೂಜಾರಿ ಕರೆದು
 ಆರತಿ ಬೆಳಗಿ
ಹರಿವಾಣವಿಟ್ಟು
ಪೂಜೆ ನೆರವೇರಿಸಿಯೇ ಬಿಡುತ್ತಾರೆ
ಅಲ್ಲಿಗೆ ನನ್ನೂರು
ಇನ್ನಷ್ಟು ಬಡವಾಗುತ್ತದೆ